ಸಣ್ಣ ಮತ್ತು ಮಧ್ಯಮ ವರ್ಗದ ಜನರಿಗೆ ಸುರಕ್ಷಿತ ಹೂಡಿಕೆ ಆಯ್ಕೆ ಹುಡುಕುತ್ತಿದ್ದರೆ, ಪೋಸ್ಟ್ ಆಫೀಸ್ RD ಯೋಜನೆ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಯಾವುದೇ ರಿಸ್ಕ್ ಇಲ್ಲದೆ ನಿಮ್ಮ ಭವಿಷ್ಯವನ್ನು ಭದ್ರಪಡಿಸಲು ಈ ಯೋಜನೆ ಸಹಾಯ ಮಾಡುತ್ತದೆ.
RD ಎಂದರೆ ರಿಕರಿಂಗ್ ಡೆಪಾಸಿಟ್. ಅಂದರೆ, ನೀವು ಪ್ರತಿ ತಿಂಗಳು ಒಂದು ನಿಗದಿತ ಮೊತ್ತವನ್ನು ಅಂಚೆ ಕಚೇರಿಯಲ್ಲಿ ಠೇವಣಿ ಇಡುತ್ತೀರಿ. ಐದು ವರ್ಷಗಳ ಅವಧಿ ಪೂರ್ಣಗೊಂಡ ನಂತರ, ನೀವು ಠೇವಣಿ ಮಾಡಿದ ಮೊತ್ತಕ್ಕೆ ಬಡ್ಡಿ ಸೇರಿ ದೊಡ್ಡ ಮೊತ್ತವನ್ನು ಪಡೆಯಬಹುದು.
ಈ ಯೋಜನೆಯ ಮುಖ್ಯ ವಿಶೇಷತೆ ಎಂದರೆ ಇದು ಸರ್ಕಾರದ ಭರವಸೆಯೊಂದಿಗೆ ಕಾರ್ಯನಿರ್ವಹಿಸುವುದು. ಹೀಗಾಗಿ ನಿಮ್ಮ ಹಣಕ್ಕೆ ಸಂಪೂರ್ಣ ಭದ್ರತೆ ಇರುತ್ತದೆ.
ಕೇವಲ ₹100ರಿಂದಲೇ ಈ ಖಾತೆ ತೆರೆಯಬಹುದು. ಉದಾಹರಣೆಗೆ, ನೀವು ಪ್ರತಿ ತಿಂಗಳು ₹10,000 ಹೂಡಿಕೆ ಮಾಡಿದರೆ, 5 ವರ್ಷಗಳಲ್ಲಿ ₹6 ಲಕ್ಷ ಜಮಾ ಆಗುತ್ತದೆ. ಇದರ ಮೇಲೆ ಬಡ್ಡಿಯಾಗಿ ₹1,13,659 ಸೇರಿ ಒಟ್ಟು ₹7,13,659 ಪಡೆಯಬಹುದು.
ಪ್ರಸ್ತುತ ಈ ಯೋಜನೆಗೆ 6.7% ವಾರ್ಷಿಕ ಬಡ್ಡಿದರ ನೀಡಲಾಗುತ್ತಿದೆ. ಇದು ತ್ರೈಮಾಸಿಕವಾಗಿ ಕಾಂಪೌಂಡ್ ಆಗುವುದರಿಂದ ನಿಮ್ಮ ಹಣ ವೇಗವಾಗಿ ಹೆಚ್ಚುತ್ತದೆ.
ಇನ್ನೊಂದು ವಿಶೇಷತೆ ಎಂದರೆ, 1 ವರ್ಷ ನಂತರ ನಿಮ್ಮ ಖಾತೆಯಲ್ಲಿರುವ ಮೊತ್ತದ 50%ವರೆಗೆ ಸಾಲ ಪಡೆಯುವ ಅವಕಾಶವೂ ಇದೆ.
ನೌಕರರು, ಸಣ್ಣ ವ್ಯಾಪಾರಿಗಳು ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಬಯಸುವವರಿಗೆ ಇದು ಅತ್ಯುತ್ತಮ ಯೋಜನೆಯಾಗಿದೆ. 5 ವರ್ಷಗಳ ಅವಧಿ ನಂತರ ಇದನ್ನು ಮತ್ತೆ ವಿಸ್ತರಿಸುವ ಅವಕಾಶವೂ