Telegram Join My Telegram WhatsApp Join My WhatsApp
https://forms.gle/q1ST6dTzZNVb7R7e6

ಕರ್ನಾಟಕ ಬಜೆಟ್ 2026: ಸಿದ್ದರಾಮಯ್ಯರ 17ನೇ ಬಜೆಟ್ – ಬೆಂಗಳೂರು, ಶಿಕ್ಷಣ, ಗ್ಯಾರಂಟಿ ಯೋಜನೆಗಳಿಗೆ ಭಾರಿ ಅನುದಾನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ 2026–27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ಇದು ಅವರ ರಾಜಕೀಯ ಜೀವನದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ರಾಜ್ಯದ ಇತಿಹಾಸದಲ್ಲೇ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್ ಇದಾಗಿದ್ದು, ಕರ್ನಾಟಕದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಈ ಬಜೆಟ್‌ ಮೇಲೆ ರಾಜ್ಯದ ರಾಜಕೀಯ ಹಾಗೂ ಆರ್ಥಿಕ ವಲಯದ ಗಮನ ನೆಟ್ಟಿದೆ. ವಿವಿಧ ಕ್ಷೇತ್ರಗಳಿಗೆ ಸರ್ಕಾರ ಘೋಷಿಸಿರುವ ಅನುದಾನ ಹಾಗೂ ಯೋಜನೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಕುತೂಹಲ ಮೂಡಿದೆ.

ದೇವಸ್ಥಾನಗಳಿಗೆ ವಿಶೇಷ ಘೋಷಣೆ

ಈ ಬಜೆಟ್‌ನಲ್ಲಿ ಕೆಲವು ಪ್ರಮುಖ ದೇವಸ್ಥಾನಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಲು ನಿರ್ಧಾರ ಮಾಡಲಾಗಿದೆ. ಜೊತೆಗೆ ವಾರಣಾಸಿ, ಮಂತ್ರಾಲಯ, ಶ್ರೀಶೈಲಂ ಮತ್ತು ತುಳಜಾಪುರದಲ್ಲಿರುವ ಮುಜರಾಯಿ ಅಧೀನದ ಛತ್ರಗಳನ್ನು ನವೀಕರಿಸುವ ಯೋಜನೆಯೂ ಘೋಷಿಸಲಾಗಿದೆ.

ಮಾತಾ ವೈಷ್ಣೋದೇವಿ ಯಾತ್ರಿಕರಿಗೆ ಡಿಬಿಟಿ ಮೂಲಕ ₹5,000 ಸಹಾಯಧನ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.

ವಿವಿಧ ಇಲಾಖೆಗಳ ಆದಾಯ ಗುರಿ

2026–27ನೇ ಸಾಲಿಗೆ ಸರ್ಕಾರ ವಿವಿಧ ಇಲಾಖೆಗಳಿಗೂ ಆದಾಯ ಗುರಿ ನಿಗದಿ ಮಾಡಿದೆ.

  • ಸಾರಿಗೆ ಇಲಾಖೆ – ₹15,500 ಕೋಟಿ

  • ನೊಂದಣಿ ಮತ್ತು ಮುದ್ರಾಂಕ ಇಲಾಖೆ – ₹29,000 ಕೋಟಿ

  • ಅಬಕಾರಿ ಇಲಾಖೆ – ₹45,000 ಕೋಟಿ

  • ಗಣಿ ಇಲಾಖೆ – ₹11,000 ಕೋಟಿ

  • ವಾಣಿಜ್ಯ ತೆರಿಗೆ ಇಲಾಖೆ – ₹1,25,000 ಕೋಟಿ

ಕನ್ನಡ ಚಿತ್ರರಂಗಕ್ಕೆ ನೆರವು

ಈ ವರ್ಷದ ಬಜೆಟ್‌ನಲ್ಲಿ ಕನ್ನಡ ಚಿತ್ರರಂಗಕ್ಕೂ ಕೆಲವು ಪ್ರಮುಖ ಘೋಷಣೆಗಳು ಮಾಡಲಾಗಿದೆ. ಫಿಲ್ಮಿ ಸಿಟಿಯಲ್ಲಿ ಥೀಮ್ ಪಾರ್ಕ್ ಹಾಗೂ ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಜೊತೆಗೆ ‘ಸಿನಿ ಮಿತ್ರ’ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಉತ್ತಮ ಚಿತ್ರಗಳಿಗೆ ಸಬ್ಸಿಡಿಗಾಗಿ ₹20 ಕೋಟಿ ಅನುದಾನ ಘೋಷಿಸಲಾಗಿದೆ.

ಪ್ರಮುಖ ಕ್ಷೇತ್ರಗಳಿಗೆ ಅನುದಾನ

ರಾಜ್ಯ ಬಜೆಟ್‌ನಲ್ಲಿ ಹಲವು ಕ್ಷೇತ್ರಗಳಿಗೆ ಭಾರಿ ಅನುದಾನ ನೀಡಲಾಗಿದೆ.

  • ಶಿಕ್ಷಣ ಇಲಾಖೆ – ₹47,224 ಕೋಟಿ

  • ಮಹಿಳಾ ಮತ್ತು ಮಕ್ಕಳ ಕಲ್ಯಾಣ – ₹34,929 ಕೋಟಿ

  • ಇಂಧನ ಇಲಾಖೆ – ₹29,947 ಕೋಟಿ

  • ಗ್ರಾಮೀಣಾಭಿವೃದ್ಧಿ – ₹26,559 ಕೋಟಿ

  • ನೀರಾವರಿ – ₹22,436 ಕೋಟಿ

  • ನಗರಾಭಿವೃದ್ಧಿ ಮತ್ತು ವಸತಿ – ₹22,203 ಕೋಟಿ

  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ – ₹17,818 ಕೋಟಿ

ಗ್ಯಾರಂಟಿ ಯೋಜನೆಗಳಿಗೆ ಮತ್ತೆ ಅನುದಾನ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಈ ಬಾರಿ ಕೂಡ ದೊಡ್ಡ ಮೊತ್ತ ಮೀಸಲಾಗಿದೆ.

  • ಗೃಹಲಕ್ಷ್ಮಿ ಯೋಜನೆ – ₹28,608 ಕೋಟಿ

  • ಅನ್ನಭಾಗ್ಯ ಯೋಜನೆ – ₹6,200 ಕೋಟಿ

  • ಗೃಹ ಜ್ಯೋತಿ ಯೋಜನೆ – ₹10,578 ಕೋಟಿ

  • ಶಕ್ತಿ ಯೋಜನೆ – ₹5,300 ಕೋಟಿ

ಆದರೆ ಯುವ ನಿಧಿ ಯೋಜನೆಗೆ ಈ ಬಾರಿ ಅನುದಾನ ನೀಡಿಲ್ಲ.

ಬೆಂಗಳೂರಿಗೆ ಭಾರಿ ಅನುದಾನ

ರಾಜ್ಯದ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೂ ಈ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

  • ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ₹7,000 ಕೋಟಿ

  • 450 ಕಿ.ಮೀ ವೈಟ್ ಟಾಪಿಂಗ್ ರಸ್ತೆ – ₹3,000 ಕೋಟಿ

  • ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ ಅಭಿವೃದ್ಧಿ – ₹1,936 ಕೋಟಿ

  • ರಿಂಗ್ ರಸ್ತೆ ಅಭಿವೃದ್ಧಿ – ₹450 ಕೋಟಿ

  • ರಾಜಕಾಲುವೆ ಅಭಿವೃದ್ಧಿ – ₹273 ಕೋಟಿ

  • ಬೆಂಗಳೂರು ಸುರಂಗ ಮಾರ್ಗ ಯೋಜನೆ – ₹17,780 ಕೋಟಿ

ಇದರ ಜೊತೆಗೆ ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆ, ಪಾದಚಾರಿ ಮಾರ್ಗ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಸುಧಾರಣೆ ಯೋಜನೆಗಳನ್ನು ಸರ್ಕಾರ ಘೋಷಿಸಿದೆ.

ಶಿಕ್ಷಣ ಕ್ಷೇತ್ರಕ್ಕೆ ಹೊಸ ಯೋಜನೆ

ಉನ್ನತ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ₹2,500 ಕೋಟಿ ವೆಚ್ಚದಲ್ಲಿ ‘ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ’ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿ 40 ಸರ್ಕಾರಿ ಕಾಲೇಜುಗಳು ಹಾಗೂ 11 ಪಾಲಿಟೆಕ್ನಿಕ್‌ಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ.

ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿ ಬೆಳೆಸಲು 9 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.

Leave a Comment