Telegram Join My Telegram WhatsApp Join My WhatsApp
https://forms.gle/q1ST6dTzZNVb7R7e6

RCB 16,700 ಕೋಟಿ deal! ಹೊಸ ಮಾಲೀಕರು ಯಾರು? ಕೊಹ್ಲಿ ನಿವೃತ್ತಿಯೇ ಕಾರಣ?

ಬೆಂಗಳೂರು: ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ಡೀಲ್ ಒಂದಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಸುಮಾರು 1.78 ಬಿಲಿಯನ್ ಡಾಲರ್ (₹16,779 ಕೋಟಿ) ಮೊತ್ತಕ್ಕೆ ಮಾರಾಟವಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ.

ಪ್ರಸ್ತುತ ಮಾಲೀಕರಾಗಿರುವ ಯುನೈಟೆಡ್ ಸ್ಪಿರಿಟ್ಸ್ (ಡಿಯಾಜಿಯೊ) ಕಂಪನಿಯಿಂದ RCB ತಂಡವನ್ನು ಪ್ರಮುಖ ಹೂಡಿಕೆದಾರರ ಒಕ್ಕೂಟ ಖರೀದಿಸಿದೆ. ಈ ಒಕ್ಕೂಟದಲ್ಲಿ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಹಾಗೂ ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್‌ಸ್ಟೋನ್ ಸೇರಿವೆ.

ಹೊಸ ಮಾಲೀಕತ್ವದಲ್ಲಿ ಆದಿತ್ಯ ಬಿರ್ಲಾ ಗ್ರೂಪ್‌ನ ಆರ್ಯಮನ್ ವಿಕ್ರಮ್ ಬಿರ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಟೈಮ್ಸ್ ಗ್ರೂಪ್‌ನ ಸತ್ಯನ್ ಗಜ್ವಾನಿ ಉಪಾಧ್ಯಕ್ಷರಾಗಿ ಜವಾಬ್ದಾರಿ ವಹಿಸಲಿದ್ದಾರೆ. ಆದರೆ ಈ ಹೊಸ ವ್ಯವಸ್ಥೆ ಐಪಿಎಲ್ 2026 (19ನೇ ಆವೃತ್ತಿ) ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ. ಅಷ್ಟರವರೆಗೆ ಡಿಯಾಜಿಯೊ ಸಂಸ್ಥೆಯೇ ತಂಡವನ್ನು ನಿರ್ವಹಿಸಲಿದೆ.

🔥 RCB ಮಾರಾಟಕ್ಕೆ ಕಾರಣ ಏನು?

ಐಪಿಎಲ್ 2025ರಲ್ಲಿ RCB ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ನಡೆದ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಹೂಡಿಕೆದಾರರಲ್ಲಿ ಆತಂಕ ಮೂಡಿಸಿತ್ತು. ಇದಲ್ಲದೆ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಐಪಿಎಲ್‌ಗೆ ನಿವೃತ್ತಿ ಹೇಳುವ ಸಾಧ್ಯತೆ ಇದೆ ಎನ್ನುವ ಚರ್ಚೆಯೂ ಹೆಚ್ಚಾಗಿದೆ.

ಕೊಹ್ಲಿ ನಿವೃತ್ತಿಯಾದರೆ ತಂಡದ ಮೌಲ್ಯ ಕುಸಿಯುವ ಸಾಧ್ಯತೆ ಇದೆ ಎಂಬ ಕಾರಣದಿಂದಲೇ ಈ ಮಾರಾಟ ನಡೆದಿದೆ ಎನ್ನಲಾಗುತ್ತಿದೆ.

Leave a Comment