Telegram Join My Telegram WhatsApp Join My WhatsApp
https://forms.gle/q1ST6dTzZNVb7R7e6

ಅಂಗನವಾಡಿಯಲ್ಲಿ 412 ಉದ್ಯೋಗಗಳು: 10ನೇ, PUC ಪಾಸ್ ಮಹಿಳೆಯರಿಗೆ ಅವಕಾಶ – ಪರೀಕ್ಷೆ ಇಲ್ಲ, ಶುಲ್ಕ ಇಲ್ಲ

ಕಲಬುರಗಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 412 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಜೊತೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವೂ ವಿಧಿಸಲಾಗುವುದಿಲ್ಲ. 10ನೇ ತರಗತಿ ಹಾಗೂ PUC ಪಾಸ್ ಮಾಡಿದ ಮಹಿಳೆಯರು ಈ ಉದ್ಯೋಗಗಳಿಗೆ ಅರ್ಜಿ ಹಾಕಲು ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಸುವ ದಿನಾಂಕ

  • ಅರ್ಜಿ ಆರಂಭ ದಿನಾಂಕ – 20 ಫೆಬ್ರವರಿ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16 ಮಾರ್ಚ್ 2026 (ಸಂಜೆ 5:30ರವರೆಗೆ)

ನೇಮಕಾತಿ ಇಲಾಖೆ

ಈ ನೇಮಕಾತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಬುರಗಿ ಜಿಲ್ಲೆ ನಡೆಸುತ್ತಿದೆ.

ಹುದ್ದೆಗಳ ವಿವರ

ಅಂಗನವಾಡಿ ಕೇಂದ್ರಗಳಲ್ಲಿ ಕೆಳಗಿನ ಹುದ್ದೆಗಳು ಭರ್ತಿ ಮಾಡಲಾಗುತ್ತಿವೆ.

  • ಅಂಗನವಾಡಿ ಕಾರ್ಯಕರ್ತೆಯರು

  • ಅಂಗನವಾಡಿ ಸಹಾಯಕಿಯರು

ಒಟ್ಟು 412 ಹುದ್ದೆಗಳು ವಿವಿಧ ತಾಲ್ಲೂಕುಗಳಲ್ಲಿ ಖಾಲಿ ಇದ್ದು ಭರ್ತಿ ಮಾಡಲಾಗುತ್ತಿದೆ.

ತಾಲ್ಲೂಕುಗಳವಾರು ಹುದ್ದೆಗಳು

  • ಅಫ್ಜಲ್ಪುರ – ಕಾರ್ಯಕರ್ತೆಯರು 6, ಸಹಾಯಕಿಯರು 35

  • ಆಳಂದ – ಕಾರ್ಯಕರ್ತೆಯರು 20, ಸಹಾಯಕಿಯರು 68

  • ಚಿಂಚೋಳಿ – ಕಾರ್ಯಕರ್ತೆಯರು 10, ಸಹಾಯಕಿಯರು 39

  • ಚಿತ್ತಾಪುರ – ಕಾರ್ಯಕರ್ತೆಯರು 5, ಸಹಾಯಕಿಯರು 29

  • ಜೇವರ್ಗಿ – ಕಾರ್ಯಕರ್ತೆಯರು 19, ಸಹಾಯಕಿಯರು 25

  • ಕಲಬುರಗಿ ಗ್ರಾಮೀಣ – ಸಹಾಯಕಿಯರು 11

  • ಕಲಬುರಗಿ ನಗರ – ಸಹಾಯಕಿಯರು 11

  • ಸೇಡಂ – ಕಾರ್ಯಕರ್ತೆಯರು 4, ಸಹಾಯಕಿಯರು 21

ವಿದ್ಯಾರ್ಹತೆ

  • ಅಂಗನವಾಡಿ ಕಾರ್ಯಕರ್ತೆಯರು – PUC ಪಾಸ್

  • ಅಂಗನವಾಡಿ ಸಹಾಯಕಿಯರು – 10ನೇ ತರಗತಿ ಪಾಸ್

ವಯೋಮಿತಿ

  • ಕನಿಷ್ಠ ವಯಸ್ಸು – 19 ವರ್ಷ

  • ಗರಿಷ್ಠ ವಯಸ್ಸು – 35 ವರ್ಷ

ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ವಿಶೇಷವಾಗಿ ವಿಕಲಚೇತನ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಇದೆ.

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಮಾಸಿಕ ಗೌರವಧನ ನೀಡಲಾಗುತ್ತದೆ.aಅರ್ಜಿ ಹಾಕುವುದು

ಹೇಗೆ ಅರ್ಜಿ ಹಾಕುವುದು?

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


Leave a Comment