Telegram Join My Telegram WhatsApp Join My WhatsApp
https://forms.gle/q1ST6dTzZNVb7R7e6

RCB Sale Bid: ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ದಾಖಲೆ ಬಿಡ್! ಐವರು ಶಾರ್ಟ್‌ಲಿಸ್ಟ್

RCB Sale Bid: ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ದಾಖಲೆ ಮೊತ್ತದ ಬಿಡ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ತಂಡಗಳ ಪೈಕಿ ಅತ್ಯಂತ ದೊಡ್ಡ ಫ್ಯಾನ್ ಬೇಸ್ ಮತ್ತು ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ಪ್ರಕ್ರಿಯೆ ಈಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. RCB Sale Bid ರೇಸ್‌ನಲ್ಲಿ ಇದೀಗ ಐವರು ಬೃಹತ್ ಹೂಡಿಕೆದಾರರು ಶಾರ್ಟ್‌ಲಿಸ್ಟ್ ಆಗಿದ್ದು, ಅವರಲ್ಲಿ ಈಗಾಗಲೇ ನಾಲ್ವರು ಅಧಿಕೃತವಾಗಿ ಬಿಡ್ ಸಲ್ಲಿಸಿದ್ದಾರೆ.

ಈಗಾಗಲೇ ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಇಂಗ್ಲಿಷ್ ಫುಟ್‌ಬಾಲ್ ದಿಗ್ಗಜ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಸಹ ಮಾಲೀಕ ಅವ್ರಾಮ್ ಗ್ಲೇಜರ್ RCB ಖರೀದಿಗೆ ದಾಖಲೆ ಮೊತ್ತದ ಬಿಡ್ ಸಲ್ಲಿಸಿದ್ದಾರೆ ಎನ್ನಲಾಗಿದೆ.


🔴 ಹೈಲೈಟ್ಸ್

  • RCB ಖರೀದಿಗೆ ಐವರು ಬಿಡ್‌ದಾರರು ಶಾರ್ಟ್‌ಲಿಸ್ಟ್

  • ಮ್ಯಾಂಚೆಸ್ಟರ್ ಯುನೈಟೆಡ್ ದಾಖಲೆ ಮೊತ್ತದ ಬಿಡ್ ಸಲ್ಲಿಕೆ

  • ಅದಾನಿ ಗ್ರೂಪ್ ಸೇರಿ ಜಾಗತಿಕ ಸಂಸ್ಥೆಗಳ ಭಾರೀ ಪೈಪೋಟಿ

  • RCBಗೆ ಹೊಸ ಮಾಲೀಕರು ಯಾರು? ಅಭಿಮಾನಿಗಳಲ್ಲಿ ಕುತೂಹಲ


RCB ಮತ್ತು ಮ್ಯಾಂಚೆಸ್ಟರ್ ಯುನೈಟೆಡ್: ಫ್ಯಾನ್ ಬೇಸ್‌ನಲ್ಲಿ ಒಂದೇ ಕಥೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟೇ ವರ್ಷ ಐಪಿಎಲ್ ಟ್ರೋಫಿಗೆ ಕೈಚಾಚಿದರೂ, ಅಭಿಮಾನಿಗಳು ತಂಡದ ಬೆನ್ನಿಗೆ ನಿಲ್ಲುವುದನ್ನು ಎಂದಿಗೂ ಬಿಟ್ಟಿಲ್ಲ. ಇದೇ ರೀತಿಯ ಅಟುಟು ಅಭಿಮಾನಿ ಬೆಂಬಲ ಇಂಗ್ಲಿಷ್ ಫುಟ್‌ಬಾಲ್ ದಿಗ್ಗಜ ಮ್ಯಾಂಚೆಸ್ಟರ್ ಯುನೈಟೆಡ್ಗೂ ಇದೆ. ಈ ಎರಡೂ ತಂಡಗಳ ನಡುವೆ ಇರುವ ಫ್ಯಾನ್ ಬೇಸ್ ಹೋಲಿಕೆ ಕಾರಣಕ್ಕಾಗಿಯೇ, ಗ್ಲೇಜರ್ ಕುಟುಂಬ RCB ಮೇಲೆ ವಿಶೇಷ ಆಸಕ್ತಿ ತೋರಿದೆ ಎನ್ನಲಾಗುತ್ತಿದೆ.


💰 ₹15,000 ಕೋಟಿ ಬಿಡ್! ಗ್ಲೇಜರ್ ದಾಖಲೆ ಆಫರ್

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಅವ್ರಾಮ್ ಗ್ಲೇಜರ್ RCB ಖರೀದಿಗೆ 1.8 ಬಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು ₹15,000 ಕೋಟಿ) ಮೊತ್ತದ ಅಧಿಕೃತ ಬಿಡ್ ಸಲ್ಲಿಸಿದ್ದಾರೆ. ಈ ಬಿಡ್‌ನಲ್ಲಿ RCB ಪುರುಷರ ಹಾಗೂ ಮಹಿಳೆಯರ ಎರಡೂ ತಂಡಗಳು ಸೇರಿವೆ.

ಗಮನಾರ್ಹ ಅಂಶವೆಂದರೆ, ಮ್ಯಾಂಚೆಸ್ಟರ್ ಯುನೈಟೆಡ್ ಯಾವುದೇ ಪಾಲುದಾರರಿಲ್ಲದೆ ಏಕಾಂಗಿಯಾಗಿ ಬಿಡ್ ಸಲ್ಲಿಸಿದೆ. ವಿಶ್ವದ ಎರಡನೇ ಅತ್ಯಂತ ಶ್ರೀಮಂತ ಫುಟ್‌ಬಾಲ್ ಕ್ಲಬ್ ಎನ್ನಿಸಿಕೊಂಡಿರುವ ಮ್ಯಾಂಚೆಸ್ಟರ್ ಯುನೈಟೆಡ್ ಈ ಮೂಲಕ IPL ಇತಿಹಾಸದಲ್ಲೇ ದೊಡ್ಡ ಡೀಲ್‌ಗೆ ಕೈ ಹಾಕಿದೆ.


🏆 ಇತ್ತೀಚಿನ ಯಶಸ್ಸು RCB ಮೌಲ್ಯ ಹೆಚ್ಚಳಕ್ಕೆ ಕಾರಣ

RCB ತಂಡವು 17 ಸೀಸನ್‌ಗಳ ದೀರ್ಘ ಕಾಯುವಿಕೆಯ ಬಳಿಕ ಇತ್ತೀಚೆಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿರುವುದು ತಂಡದ ಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಅದರ ಜೊತೆಗೆ, RCB ಮಹಿಳಾ ತಂಡ ಎರಡನೇ ಬಾರಿ ಪ್ರಶಸ್ತಿ ಗೆದ್ದಿರುವುದು ಬ್ರ್ಯಾಂಡ್ ವ್ಯಾಲ್ಯೂಗೆ ಮತ್ತಷ್ಟು ಬಲ ನೀಡಿದೆ.


RCB ಖರೀದಿ ರೇಸ್‌ನಲ್ಲಿ ಅದಾನಿ ಗ್ರೂಪ್

RCB Sale Bid ಪೈಪೋಟಿಯಲ್ಲಿ ಮಂಚೂಣಿಯಲ್ಲಿರುವ ಮತ್ತೊಂದು ಪ್ರಮುಖ ಹೆಸರು ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್. ಈಗಾಗಲೇ ಐಪಿಎಲ್‌ನ ಗುಜರಾತ್ ಜೈಂಟ್ಸ್ ತಂಡವನ್ನು ಹೊಂದಿರುವ ಅದಾನಿ ಗ್ರೂಪ್, RCBಗೆ ಇರುವ ಅಪಾರ ಅಭಿಮಾನಿ ಬಳಗವನ್ನು ಗಮನಿಸಿ, ಗ್ಲೇಜರ್ ಬಿಡ್‌ಗಿಂತಲೂ ಹೆಚ್ಚಿನ ಮೊತ್ತ ನೀಡಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.


🔍 ಬಿಡ್‌ನಲ್ಲಿ ಇರುವ ಇತರ ಸಂಸ್ಥೆಗಳು

RCB ಖರೀದಿಗೆ ಆಸಕ್ತಿ ತೋರಿಸಿರುವ ಇತರ ಪ್ರಮುಖ ಸಂಸ್ಥೆಗಳು:

  • ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್‌ಮೆಂಟ್ ಫಂಡ್ (PIF)

  • ಜಿಂದಾಲ್ ಸೌತ್ ವೆಸ್ಟ್ (ಪಾರ್ಥ್ ಜಿಂದಾಲ್ ನೇತೃತ್ವದಲ್ಲಿ)

  • ಟಾಟಾ ಗ್ರೂಪ್ ಅಥವಾ CVC ಕ್ಯಾಪಿಟಲ್

ಸೌದಿ ಸಂಸ್ಥೆಗಳು ಫುಟ್‌ಬಾಲ್ ಹಾಗೂ ಗಾಲ್ಫ್ ಕ್ರೀಡೆಗಳಲ್ಲಿ ಭಾರೀ ಹೂಡಿಕೆ ಮಾಡುತ್ತಿರುವ ಹಿನ್ನೆಲೆ, RCB ಮೇಲೆ ಇವರ ಕಣ್ಣು ಬಿದ್ದಿದೆ. ಜಿಂದಾಲ್ ಸೌತ್ ವೆಸ್ಟ್‌ಗೆ ಬೆಂಗಳೂರಿನೊಂದಿಗೆ ಹಳೆಯ ನಂಟಿದ್ದು, ಹಿಂದೆ ಬೆಂಗಳೂರು FC ತಂಡದ ಮಾಲೀಕತ್ವ ಇವರ ಬಳಿ ಇತ್ತು. ಟಾಟಾ ಗ್ರೂಪ್ ಈಗಾಗಲೇ ಐಪಿಎಲ್ ಟೈಟಲ್ ಸ್ಪಾನ್ಸರ್ ಆಗಿರುವುದರಿಂದ, ಈ ಬಿಡ್‌ಗೆ ಹೆಚ್ಚಿನ ಮಹತ್ವ ದೊರೆತಿದೆ.


🔚 ಅಂತಿಮ ತೀರ್ಮಾನಕ್ಕೆ ಇನ್ನೂ ಕಾಯಬೇಕು

RCB ಮಾರಾಟದ ಅಂತಿಮ ಬಿಡ್ ಇನ್ನಷ್ಟೇ ಶಾರ್ಟ್‌ಲಿಸ್ಟ್ ಆಗಬೇಕಿದ್ದು, ಮುಂದಿನ ದಿನಗಳಲ್ಲಿ ಯಾವ ಸಂಸ್ಥೆ ಬೆಂಗಳೂರು ತಂಡದ ನೂತನ ಬಾಸ್ ಆಗಲಿದೆ ಎನ್ನುವುದು ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. RCB ಅಭಿಮಾನಿಗಳು ಈಗ ಒಂದೇ ಪ್ರಶ್ನೆ ಕೇಳುತ್ತಿದ್ದಾರೆ – “ಈ ಬಾರಿ RCBಗೆ ಯಾರು ಹೊಸ ಮಾಲೀಕರು?”

Leave a Comment