Telegram Join My Telegram WhatsApp Join My WhatsApp
https://forms.gle/q1ST6dTzZNVb7R7e6

ಕ್ಯಾಮೆರಾದಲ್ಲಿ ಸೆರೆಯಾದ ಟಿಮ್ ಡೇವಿಡ್ ಅಸಭ್ಯ ಸನ್ನೆ; IPL ನಲ್ಲಿ ಮತ್ತೆ ವಿವಾದ

ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎರಡು ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ ಆರ್‌ಸಿಬಿ ಗೆಲುವಿನ ಪ್ರಮುಖ ಹೀರೋ ಆಗಿ ಹೊರಹೊಮ್ಮಿದರು. ಆದರೆ ಪಂದ್ಯದ ಬಳಿಕ ಟಿಮ್ ಡೇವಿಡ್ ಮಾಡಿದ ವಿವಾದಾತ್ಮಕ ಸನ್ನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮೊದಲು ಬೌಲಿಂಗ್‌ನಲ್ಲಿ ಮಿಂಚಿದ ಭುವನೇಶ್ವರ್ ಕುಮಾರ್ ನಾಲ್ಕು ವಿಕೆಟ್ ಪಡೆದು ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕ್ರಮವನ್ನು ಕುಸಿತಕ್ಕೊಳಪಡಿಸಿದರು. ಬಳಿಕ ಗುರಿ ಬೆನ್ನಟ್ಟುವ ವೇಳೆ ಕೊನೆಯ ಓವರ್‌ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಆರ್‌ಸಿಬಿಗೆ ರೋಚಕ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ನೇರ ಅಗ್ರಸ್ಥಾನಕ್ಕೇರಿದೆ.

ಭುವನೇಶ್ವರ್ ಕುಮಾರ್ ಮ್ಯಾಚ್ ವಿನ್ನಿಂಗ್ ಸಿಕ್ಸರ್ ಬಾರಿಸಿದ ತಕ್ಷಣ ಆರ್‌ಸಿಬಿ ಡಗೌಟ್‌ನಲ್ಲಿದ್ದ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇದೇ ವೇಳೆ ಟಿಮ್ ಡೇವಿಡ್ ಮಾಡಿದ ಸನ್ನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ.

ವಿಡಿಯೋದಲ್ಲಿ ಟಿಮ್ ಡೇವಿಡ್ ಕೋಪಭರಿತವಾಗಿ ಕೈಗಳನ್ನು ಮೇಲಕ್ಕೆತ್ತಿ ಅಸಭ್ಯ ಸನ್ನೆ ಮಾಡುತ್ತಿರುವುದು ಕಾಣಿಸಿಕೊಂಡಿದೆ. ಈ ಘಟನೆ ಅಭಿಮಾನಿಗಳ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೇಗವಾಗಿ ಹರಡುತ್ತಿದೆ.

ಟಿಮ್ ಡೇವಿಡ್ ಈ ಸನ್ನೆಯನ್ನು ಸಂಭ್ರಮಾಚರಣೆಯ ಭಾಗವಾಗಿ ಮಾಡಿದ್ದಾರಾ ಅಥವಾ ಎದುರಾಳಿ ಆಟಗಾರರತ್ತ ಉದ್ದೇಶಪೂರ್ವಕವಾಗಿ ಮಾಡಿದ್ದಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕೆಲವರು ಅವರು ಗೋಲ್ಡನ್ ಡಕ್ ಆಗಿದ್ದರಿಂದ ನಿರಾಶೆಯಲ್ಲಿ ಈ ರೀತಿಯ ವರ್ತನೆ ತೋರಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೀಗ ಐಪಿಎಲ್ ಹಾಗೂ ಬಿಸಿಸಿಐ ಈ ಘಟನೆಗೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಐಪಿಎಲ್ ನೀತಿ ಸಂಹಿತೆಯ ಪ್ರಕಾರ ಅಶ್ಲೀಲ ಅಥವಾ ಅವಮಾನಕಾರಿ ಸನ್ನೆಗಳು ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ಈಗಾಗಲೇ ಆರ್‌ಸಿಬಿ ಮುಖ್ಯ ಕೋಚ್ Andy Flower ಅವರಿಗೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪಂದ್ಯ ಶುಲ್ಕದ 15 ಶೇಕಡಾ ದಂಡ ವಿಧಿಸಲಾಗಿದೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಮ್ಯಾಚ್ ರೆಫರಿಯ ನಿರ್ಧಾರವನ್ನು ಅಂಗೀಕರಿಸಿದ್ದರು.

ಇನ್ನೊಂದೆಡೆ ಟಿಮ್ ಡೇವಿಡ್ ಕೂಡ ಇದೇ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಅಂಪೈರ್ ಜೊತೆ ಚೆಂಡು ಬದಲಾವಣೆ ವಿಚಾರದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಡಿಮೆರಿಟ್ ಪಾಯಿಂಟ್ ಹಾಗೂ ಪಂದ್ಯ ಶುಲ್ಕದ 25 ಶೇಕಡಾ ದಂಡಕ್ಕೆ ಗುರಿಯಾಗಿದ್ದರು.

ಇದೀಗ ಮತ್ತೆ ವಿವಾದದಲ್ಲಿ ಸಿಲುಕಿರುವ ಟಿಮ್ ಡೇವಿಡ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಐಪಿಎಲ್ ನೀತಿ ಸಂಹಿತೆಯ ಪ್ರಕಾರ ಇಂತಹ ವರ್ತನೆಗೆ ವೇತನದ 50 ರಿಂದ 100 ಶೇಕಡಾ ದಂಡ ವಿಧಿಸುವುದರ ಜೊತೆಗೆ, ಗಂಭೀರ ಪ್ರಕರಣವಾಗಿದ್ದರೆ ಪಂದ್ಯ ನಿಷೇಧವೂ ಎದುರಾಗಬಹುದು.

ಸದ್ಯಕ್ಕೆ ಈ ವಿವಾದದ ಬಗ್ಗೆ ಐಪಿಎಲ್ ಮಂಡಳಿ ಅಥವಾ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Leave a Comment