ಲಕ್ನೋ: ಸಂಕಷ್ಟದ ಪರಿಸ್ಥಿತಿಯಿಂದಲೇ ಅದ್ಭುತ ಕಮ್ಬ್ಯಾಕ್ ಮಾಡಿದ Delhi Capitals ತಂಡವು Lucknow Super Giants ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. Sameer Rizvi ಮತ್ತು Tristan Stubbs ಅವರ ಅಜೇಯ ಜೊತೆಯಾಟ ಪಂದ್ಯ ತಿರುವು ತಂದಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 18.4 ಓವರ್ಗಳಲ್ಲಿ 141 ರನ್ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ 17.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಸುಲಭ ಜಯ ಸಾಧಿಸಿತು.
ಆದರೆ ಡೆಲ್ಲಿಯ ಆರಂಭ ಬಹಳ ನಿರಾಶಾಜನಕವಾಗಿತ್ತು. KL Rahul ಮೊದಲ ಎಸೆತದಲ್ಲೇ ಔಟಾದರು. Nitish Rana 15 ರನ್, ನಿಸಾಂಕ 1 ರನ್, ನಾಯಕ Axar Patel ಶೂನ್ಯಕ್ಕೆ ಔಟಾದಾಗ ತಂಡ 4.3 ಓವರ್ಗಳಲ್ಲಿ 26 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಸಮೀರ್ ರಿಜ್ವಿ ಮತ್ತು ಟ್ರಿಸ್ಟನ್ ಸ್ಟಬ್ಸ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು. ಇಬ್ಬರೂ 5ನೇ ವಿಕೆಟ್ಗೆ 76 ಎಸೆತಗಳಲ್ಲಿ ಭರ್ಜರಿ 119 ರನ್ಗಳ ಅಜೇಯ ಜೊತೆಯಾಟ ನೀಡಿದರು.
ರಿಜ್ವಿ 47 ಎಸೆತಗಳಲ್ಲಿ 70 ರನ್ (5 ಬೌಂಡರಿ, 4 ಸಿಕ್ಸ್) ಹಾಗೂ ಸ್ಟಬ್ಸ್ 32 ಎಸೆತಗಳಲ್ಲಿ 39 ರನ್ (3 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಬೌಲಿಂಗ್ನಲ್ಲಿ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಲಕ್ನೋ ತಂಡ ನಂತರ ನಿಯಂತ್ರಣ ಕಳೆದುಕೊಂಡಿತು. ವಿಶೇಷವಾಗಿ 20 ಇತರೇ ರನ್ (ಲೆಗ್ ಬೈ 4, ವೈಡ್ 16) ನೀಡಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.
ಲಕ್ನೋ ಪರ Mitchell Marsh 35 ರನ್ ಹಾಗೂ Abdul Samad 36 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು.
ಡೆಲ್ಲಿ ಪರ Lungi Ngidi ಮತ್ತು T Natarajan ತಲಾ 3 ವಿಕೆಟ್ ಪಡೆದರೆ, Kuldeep Yadav 2 ವಿಕೆಟ್ ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು